ನಮ್ಮಲ್ಲಿ ಜಗತ್ತಿಗೆ ಮಾದರಿಯಾಗುವ ಸಂವಿಧಾನ ಇದೆ. ಆದರೆ ಅದರ ಅರಿವು ಪಾಲನೆ ಅನುಷ್ಠಾನವಿಲ್ಲ. ಮೊನ್ನೆ ನಮ್ಮಮನೆಯಲ್ಲಿ ಮಗಳೊಂದಿಗೆ ಸ್ವಾರಸ್ಯಕರ ಚರ್ಚೆ ನಡೆಯಿತು, ಇಂದಿನ ಮಕ್ಕಳು ಹೇಳುವಂತೆ ಒಂದು ಪಾಟ್ ಕಾಷ್,.
ನೀಟ್ ಪರೀಕ್ಷೆಯಲ್ಲಿ ನಡೆದ ಸೋರಿಕೆ ಮತ್ತು ಅದರ ನಂತರದ ದುರಂತಗಳನ್ನು ಪ್ರತಿಭಟಿಸಿ ಯಾರೋ ಒಬ್ಬರು ಉಪವಾಸಕ್ಕೆ ನಿಮ್ಮ ಬೆಂಬಲ ಉಂಟಾ. ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಳು. ಮೇಲು ಇದು ಬೆಂಬಲಿಸುವ ವಿ಼ಷಯ. ಹಲವಾರು ಮಕ್ಕಳ ಪ್ರಾಣಕ್ಕೆ ಎರವಾದ ಹಗರಣವಿದು. ಆದರೆ ನಮ್ಮ ಕಾನೂನು, ನಮ್ಮ ಪ್ರಜಾಪ್ರಭುತ್ವದ ಮುಖಗಳನ್ನು ಅರಿವಿದ್ದವನು ಒಂದೇ ಯೋಜನೆಯಲ್ಲಿ ಬೆಂಬಲಿಸುವುದು ಕಷ್ಟ. ಯಾಕೆಂದರೆ ಎಲ್ಲಾ ನಿಯಮ ನಿಬಂಧನೆಗಳನ್ನು ತಮ್ಮ ಸ್ವಾರ್ಥಕ್ಕೆ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸುವ ರಾಜಕೀಯ ಹುನ್ನಾರಗಳು ಇಂದು ಮೊದಲಲ್ಲ. ಇದರಲ್ಲಿ ಪ್ರಾಮಾಣಿಕತೆಯ ವಿಷಯದಲ್ಲಿ ವಿಶ್ವಾಸ ಕಳೆದು ಹೋಗಿದೆ. ಈ ಘಟನೆಯಲ್ಲಿ ಸತ್ಯವೋ ಸುಳ್ಳೋ ಅದರ ಬಗ್ಗೆ ಹೇಳುವುದಲ್ಲ. ಇದು ಸತ್ಯವೇ ಇರಬಹುದು ಎಂದು ತಿಳಿದರೂ ಯೋಚನೆಗಳು ಹಲವಾರು ಇರುತ್ತದೆ.
ಸದರಿ ಸಚಿವರ ರಾಜೀನಾಮೆ ಆಗ್ರಹಿಸಿ ಈ ಸತ್ಯಾಗ್ರಹ ನಡೆಯುತ್ತದೆ. ಆಗ್ರಹವೇನೋ ಸರಿ ಆದರೆ ಫಲಶ್ರುತಿ ಏನು ಅಂತ ಯೋಚಸಿದರೆ ನಮ್ಮ ಪ್ರಜಾಪ್ರಭುತ್ವದ ಇತಿಹಾಸವನ್ನು ಅವಲೋಕಿಸಿದರೆ ನಂಬಿಕೆಯೇ ಹೊರಟು ಹೋಲುತ್ತದೆ. ಒಂದು ವೇಳೆ ನೈತಿಕ ಹೊಣೆ ಹೊತ್ತು ಸಚಿವರು ಪದತ್ಯಾಗ ಮಾಡಿದರೂ ಇನ್ನೊಬ್ನ ಬಂದರೂ ಇದು ಸರಿಯಾಗಬಹುದೇ? ಖಂಡಿತ ಇಲ್ಲ. ಹಾಗಾಗಿ ಇವುಗಳಲ್ಲಿ ರಾಜಕೀಯ ಧೋರಣೆ ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ. ಹಚ್ಚೇಕೆ ಈಗ ಉಪವಾಸ ಮಲಗಿದವರನ್ನ ಅಲ್ಲಿ ತಂದು ಕೂರಿಸಿದರೂ ವ್ಯವಸ್ಥೆ ಸರಿಯಾಗುವ ಭರವಸೆ ಇಲ್ಲ. ಹಾಗಾಗಿ ಹೇಳಬಹುದು ಶ್ರೇಷ್ಠವಾದ ಕಾನೂನು ಇದೆ ಅನುಷ್ಠಾನ ಇಲ್ಲ.
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದವು. ನಾವು ಗಂಭೀರವಾದ ನಿಯಮ ಮಾಡಿದ್ದೇವೆ ಅದನ್ನು ಗೌರವಿಸುವುದನ್ನು ಅರಿತೇ ಇಲ್ಲ. ಇದುವರೆಗೆ ಆಳಿದವರು ತಂದಿಟ್ಟ ದುರಂತವಿದು. ದೇಶವನ್ನು ಕಾಡುವುದು, ಬಡತನವಲ್ಲ, ಜನ ಸಂಖ್ಯೆಯಲ್ಲ ಪ್ರಕೃತಿ ವಿಕೋಪವಲ್ಲ... ಕಾಡುವುದು ಭ್ರಷ್ಟಾಚಾರ. ಆಳಿದವರು ಇದನ್ನೇ ಕಲಿಸಿದ್ದು ಇದನ್ನೇ ತೋರಿಸಿದ್ದು . ಒಂದು ಡಾಲರ್ ಒಂದು ರೂ ಇದ್ದದ್ದು ಐವತ್ತು ಆದಾಗ ಅರಿವಾಗಲೂ ಇಲ್ಲ.ಪ್ರತಿಭಟಿಸಲೂ ಇಲ್ಲ. ಕಾರಣ ಯಾರು?
ಒಂದು ಮಂತ್ರಿಯೋ ಶಾಸಕನೋ ರಾಜೀನಾಮೆ ಕೊಟ್ಟರೆ ವ್ಯವಸ್ಥೆ ಬದಲಾಗುವುದಿಲ್ಲ. ವ್ಯಕ್ತಿಮಾತ್ರ ಬದಲಾಗುತ್ತಾನೆ. ಕದ್ದು ನೋಡುವವರು ಇರುವ ತನಕ ಕದಿಯುವವರು ಇರುತ್ತಾರೆ. ಕಾನೂನಿಗಿಂತಲೂ ನಮಗವಶ್ಯವಿರುವುದು ನೀತಿ. ಸಾಮಾಜಿಕ ಪ್ರಜ್ಞೆ. ಅದಿಲ್ಲವಾದರೆ ಯಾವುದೂ ಬದಲಾಗುವುದಿಲ್ಲ. ಎಷ್ಟು ಬಿಗಿಯಾದ ಕಾನೂನು ಇದ್ದರೇನು, ನಮಗೆ ಕಾನೂನಿಗಿಂತಲೂನ ನಮ್ಮ ಜಾತಿ ಧರ್ಮವೇ ಮುಖ್ಯವಾಗಿ ಹಿರಿದಾಗುತ್ತದೆ. ಮಾನವೀಯತೆ ಸಾಯುತ್ತದೆ. ಇಷ್ಟಾದರೂ ಇದು ಹಗರಣದ ಸಮರ್ಥನೆಯಲ್ಲ. ಯಾಕೆಂದರೆ ಹಗರಣ ನಮಗೇನು ಹೊಸತಲ್ಲ. ಅದುವೇ ಸಹಜ ಬದುಕಾಗಿದೆ.
No comments:
Post a Comment