ಮಲಯಾಳಂ ಚಲನ ಚಿತ್ರ ನಟ ನಿರ್ದೇಶಕ ಮಾತ್ರವಲ್ಲ ಚಿತ್ರಕಥೆಯನ್ನೂ ಬರೆಯುವ ಪ್ರತಿಭಾವಂತ ಶ್ರೀನಿವಾಸ್ ಇವರು ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಹಲವು ಸಲ ನೀಡುತ್ತಾರೆ. ಇವರ ಸಿನಿಮಾಗಳಲ್ಲಿ ಇಂತಹ ಸನ್ನಿವೇಶ ಸಂಭಾಷಣೆಗಳಲ್ಲಿ ಅದೇ ವೈಶಿಷ್ಟ್ಯವಾಗಿದೆ. ಹೀಗೆ ಕಾರ್ಯಕ್ರಮ ಒಂದರಲ್ಲಿ ಹೆಲ್ಮೆಟ್ ಖಡ್ಡಾಯದ ಬಗ್ಗೆ ಒಂದು ವಿಡಂಬನೆಯನ್ನು ಹೇಳುತ್ತಾರೆ. ನಮ್ಮ ಆಹಾರ ಜೀವನ ಎಲ್ಲವು ಎಷ್ಟು ಕಲುಷಿತವಾಗಿದೆ ಎಂದರೆ ಇಂದು ಕಲುಷಿತವಲ್ಲದೇ ಇದ್ದದ್ದು ಯಾವುದೂ ಸಿಗುವುದಿಲ್ಲ. ಸಿಗುವ ತರಕಾರಿ ಎಲ್ಲಿಂದಲೋ ಬರುತ್ತದೆ, ಯಾವುದೋ ವಿಷಕಾರಿ ರಾಸಾಯನಿಕವನ್ನು ಹೊಂದಿದ್ದರೆ, ಇನ್ನು ಅಮೃತ ಎಂದು ಸಿಗುವ ಹಾಲು ಅದು ಮೂಲ ಸ್ವರೂಪದಲ್ಲಿ ಹಳ್ಳಿಯಲ್ಲೂ ಸಿಗುವುದಿಲ್ಲ. ಹೆಚ್ಚಿನವರಿಗೆ ತಿಳಿದಿಲ್ಲ. ಚಳಿಗಾಲದ ನಂತರ ಹಾಲು ಮೊಸರಿನ ಬೇಡಿಕೆ ಹೆಚ್ಚು ಇರುತ್ತದೆ. ಆದರೆ ಆಗ ಹಾಲು ಉತ್ಪಾದನೆ ಬಹಳ ಕಡಿಮೆ ಇರುತ್ತದೆ. ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಅಧಿಕವಾಗಿದ್ದರೆ ಬೇಡಿಕೆ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಳಿದ ಹಾಲನ್ನು ಸಂಸ್ಕರಿಸಿ ಪುಡಿ ಮಾಡಿ ಸಂಗ್ರಹಿಸುತ್ತಾರೆ, ನಂತರ ಅದನ್ನು ಬೇಸಗೆಯಲ್ಲಿ ಬೇಡಿಕೆ ಅಧಿಕವಾಗಿದ್ದಾಗ ಅದನ್ನು ದ್ರವೀಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಹೀಗಾಗಿ ಪ್ರತಿ ಹಂತದಲ್ಲೂ ಅದಕ್ಕೆ ಹಲವಾರು ರಾಸಾಯನಿಕಗಳು ಸೇರಲೇ ಬೇಕಾಗುತ್ತದೆ. ಆದರೆ ಇದನ್ನೆಲ್ಲ ಪರಿಸ್ಥಿತಿಗೆ ಹೊಂದಿಕೊಂಡು ನಾವು ಒಪ್ಪಿಕೊಳ್ಳಲೇ ಬೇಕು. ಬೇಸಗೆಯಲ್ಲಿ ಸಿಗುವ ಹಾಲು ಯಾವುದೋ ಕಾಲದಲ್ಲಿ ಜಾನುವಾರು ನಿಂದ ಸಿಕ್ಕಿದ ಹಾಲಾಗಿರುತ್ತದೆ. ಇದು ಹಲವು ಸಲ ವಿಷಕಾರಿಯಾಗಿರುವುದು ವಿಪರ್ಯಾಸ. ಇನ್ನು ತಿನ್ನುವ ತರಕಾರಿ ಮತ್ತು ಈಗ ಮಾರುಕಟ್ಟೆಯಲ್ಲಿ ಸಿಗುವ ಆಹಾರದ ಕಥೆ ಹೇಳುವುದೇ ಬೇಡ. ಈಗ ಮನೆಯಲ್ಲಿ ದಿನ ನಿತ್ಯ ಸೇವಿಸುವ ಅನಿವಾರ್ಯ ಆಹಾರವನ್ನು ಕೂಡ ಸ್ವಂತ ತಯಾರಿಸುವುದಿಲ್ಲ. ಅದನ್ನು ಹೊರಗಿನಿಂದ ತರಿಸುತ್ತಾರೆ. ಅದು ಎಲ್ಲೋ ಹೇಗೋ ತಯಾರಿಸಿ ನಮ್ಮ ಕೈಗೆ ಬಂದು ಬೀಳುತ್ತದೆ. ನಮ್ಮ ಸೌಕರ್ಯಕ್ಕೆ ನಾವು ಅದರ ಪರಿಶುದ್ದತೆಯ ಬಗ್ಗೆ ವಿಶ್ವಾಸವನ್ನಷ್ಟೇ ಇಡಬೇಕು. ಆದರೆ ಅದು ಅದಕ್ಕೆ ಅನುಗುಣವಾಗಿರುವುದಿಲ್ಲ. ಶ್ರೀನಿವಾಸ್ ಹೇಳುತ್ತಾರೆ ದಾರಿ ಬದಿಯಲ್ಲಿ ಸಿಗುವ ಆಹಾರ ಹಣ್ಣು ಹಂಪಲು ತರಕಾರಿ ನಂತರ ಈ ಅರೋಗ್ಯ ಪೂರ್ಣ ಅಂತ ಸೇವಿಸುವ ಹಾಲು ಪ್ರತೀಕ್ಷಣವೂ ಜೀವಕ್ಕೆ ಅಪಾಯಕಾರಿಯಾಗಿರುವಾಗ....ಇದನ್ನೆಲ್ಲ ತಿಂದು ಶಿರಸ್ತ್ರಾಣ ಅಥವಾ ಹೆಲ್ಮೆಟ್ ಒಂದು ತಲೆಗೆ ಹಾಕಿಕೊಂಡು ವಾಹನದಲ್ಲಿ ಸುರಕ್ಷಿತರಂತೆ ಹೋಗುತ್ತೇವೆ. ತಿನ್ನುವ ಆಹಾರದಲ್ಲಿ ಇಲ್ಲದ ಭದ್ರತೆ....ಈ ಹೆಲ್ಮೆಟ್ ನಿಂದ ಸಿಗಬಹುದೇ..ವಿಪರ್ಯಾಸವೆಂದರೆ ಅದಕ್ಕೂ ಖಡ್ಢಾಯದ ನಿಯಮವಿದೆ. ಇದು ಯಾಕಾಗಿ?
ಸುರಕ್ಷತೆಯ ದೃಷ್ಟಿಯಿಂದ ನಿಯಮ ಖಡ್ಡಾಯವಾಗಿ ಇರಲೇಬೇಕು. ಅದು ಅನಿವಾರ್ಯ. ಆದರೆ ಈ ಆಹಾರ ಹಾಲು ಹಣ್ಣು ತರಕಾರಿ ಹೊಗಲಿ ಉಚಿತವಾಗಿ ಇರುವ ಗಾಳಿ ಇವುಗಳಿಗೆ ಇಲ್ಲದ ಸುರಕ್ಷತೆ ಕೇವಲ ತಲೆಗೆ ಮಾತ್ರ ಇರುವುದು ವಿಡಂಬನೆ ಎಂದನಿಸುತ್ತದೆ. ಹೆಲ್ಮೆಟ್ ನಿಂದ ತಲೆ ಉಳಿದರೂ...ಈ ಕಲುಷಿತ ಆಹಾರ ಗಾಳಿಯನ್ನು ಸೇವಿಸಿ ಮನುಶ್ಯ ಎಷ್ಟು ಸಮಯ ಕ್ಷೇಮದಿಂದ ಬದುಕುಳಿದಾನು? ಆದರೂ ಅದಕ್ಕೊಂದು ಖಡ್ಡಾಯ ನಿಮಮ ನಮ್ಮನ್ನು ಅಣಕಿಸುತ್ತದೆ.
ಪ್ಲಾಸ್ಟಿಕ ವಾತವರಣಕ್ಕೆ ಹಾನಿಕರ. ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದು ನಿಷೇಧಿಸಲಾಗಿದೆ. ಆದರೂ ಬಳಕೆ ಎಲ್ಲಿ ಕಡಿಮೆಯಾಗಿದೆ. ನಿಯಮಾನುಸಾರ ಅದನ್ನು ಹಿಡಿದು ಕೊಂಡು ಹೋಗುವ ಬಡಪಾಯಿಂದ ದಂಡ ವಸೂಲಿ ಮಾಡಬಹುದು. ಇನ್ನಿತರ ಶಿಕ್ಷೆ ವಿಧಿಸಬಹುದು. ಯಾಕೆಂದರೆ ಆತ ಸುಲಭದಲ್ಲಿ ಸಿಗುತ್ತಾನೆ. ಆದರೆ ಇದುವರೆಗೆ ಪ್ಲಾಸ್ಟಿಕ್ ಚೀಲ ಉತ್ಪಾದನೆ ಎಲ್ಲಾಗುತ್ತದೆ ಎಂದು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾದರೂ ಅದಕ್ಕೆ ಶಿಕ್ಷೆ ಅನ್ವಯವಾಗುವುದೇ ಇಲ್ಲ. ನಿಜಕ್ಕಾದರೆ ಉತ್ಪಾದನೆಯನ್ನು ತಡೆ ಹಿಡಿದರೆ ಬಳಕೆ ತನ್ನಿಂತಾನಾಗಿ ನಿಯಂತ್ರಿಸಲ್ಪಡುತ್ತದೆ. ಆದರೆ ಅದಕ್ಕೆ ಯಾವ ಪ್ರತಿಭಂಧಕವೂ ಇರದೇ ಎಲ್ಲಾ ನಿಯಮಗಳು ನಿಜ ಜೀವನವನ್ನು ಆಧ್ವಾನ ಮಾಡುವುದಕ್ಕಷ್ಟೇ ಸೀಮಿತವಾಗಿದೆ.
ಸಾರ್ವಜನಿಕವಾಗಿ ಧೂಮ ಪಾನ ಮಾಡಬಾರದು ಎಂಬ ನಿಯಮವಿದೆ. ಈ ಬೆಂಗಳೂರು ಏಕೆ ಸಣ್ಣ ನಗರದಲ್ಲೂ ಇದು ಕೇವಲ ನಿಯಮವಾಗಿ ಮಾತ್ರ ಉಳಿದಿದೆ. ಸಾರ್ವಜನಿಕವಾಗಿ ಉಚಿತವಾಗಿ ಸಿಗುವ ಈ ಧೂಮವನ್ನು ಸೇವಿಸಿ ನಾವು ಸುರಕ್ಷಿತರಂತೆ ಹೆಲ್ಮೆಟ್ ಧರಿಸಿ ಅಭಿನಯಿಸುತ್ತೇವೆ. ವಿಚಿತ್ರ ಎನಿಸುವುದಿಲ್ಲವೆ. ಹಾಗಾಗಿ ಶ್ರೀನಿವಾಸ್ ಹೇಳಿದ್ದು ಹೆಲ್ಮೇಟ್ ಖಡ್ದಾಯ ಒಂದು ವಿಡಂಬನೆ. ದೊಡ್ಡ ಪ್ರಹಸನ. ತ್ರಾಣವಿಲ್ಲದೇ ಇದ್ದರೂ ಶಿರಸ್ತ್ರಾಣ ಬೇಕು.
No comments:
Post a Comment