“ಮನೆ ಚಿಕ್ಕದಾದರೂ ಪರವಾಗಿಲ್ಲ ಮನಸ್ಸು
ದೊಡ್ಡದಾಗಿರಬೇಕು” ಎಂಬ ಮಾತು ಜನ ಜನಿತ. ಬಹಳ ಸರಳವಾದ ತತ್ವವಾದರೂ ಅದರ ಆಶಯ ಬಹಳ ಹಿರಿದು. ದೊಡ್ಡದಾದ
ಮನೆಯಿದೆ.... ಅದರಲ್ಲಿ ವಾಸವಾಗಿದ್ದೇವೆ, ಬದುಕು
ಎಷ್ಟು ಯಾಂತ್ರಿಕವಾಗಿರುತ್ತದೆ ಎಂದು ಕಲ್ಪಿಸಿ. ಮನೆಯ ಮಂದಿ ಪರಸ್ಪರ ಭೇಟಿಯಾಗುವುದೇ ಬಹಳ ಅಪರೂಪವಾಗಿರುತ್ತದೆ.
ದೊಡ್ಡ ಮನೆಯ ಆ ತುದಿಯ ಕೊಣೆಯಲ್ಲಿ ಅಕ್ಕನೋ ತಮ್ಮನೋ ಇದ್ದು ಇನ್ನೋಂದು ತುದಿಯ ಕೋಣೆಯಲ್ಲಿ ಅಪ್ಪ
ಮಾವ ಹೀಗೆ ಬಹಳ ಚಿಕ್ಕದಾದರೂ ಅಂತರದಲ್ಲೇ ಅಥವಾ ಒಂದು ರೀತಿಯ ಮರೆಯಲ್ಲೇ ದಿನ
ಕಳೆಯುತ್ತಿದ್ದೇವೆ. ಪರಸ್ಪರ ಭೇಟಿ ಬಹಳ ಕಡಿಮೆಯಾಗಿರುತ್ತದೆ. ಮಾತ್ರವಲ್ಲ ಕೆಲವು ಸಲ ಮನೆಯೊಳಗೆ ಮೊಬೈಲ್ ಮೂಲಕವೇ ಮಾತನಾಡುವ ಸಂದರ್ಭಗಳನ್ನು
ಕಲ್ಪಿಸಿ ಮನೆಯೊಳಗೆ ಇದ್ದು ಒಂದು ರೀತಿಯ ಅಂತರದಲ್ಲೇ ದಿನಕಳೆಯುತ್ತಿದ್ದೇವೆ.
ಅದೇ ಚಿಕ್ಕದಾದ ಮನೆಯನ್ನು ಕಲ್ಪಿಸಿ.. ಪರಸ್ಪರ
ಮುಖದರ್ಶವನ್ನು ತಪ್ಪಿಸಿಕೊಳ್ಳುವ ಹಾಗಿಲ್ಲ.. ದೇಹಾಂತರವಿದ್ದರೂ ಬಹಳ ಹತ್ತಿರದಲ್ಲೇ ಪಿಸುದನಿಯ
ಅಂತರದಲ್ಲೇ ಇರುತ್ತೇವೆ. ಇಲ್ಲಿ ಹತ್ತಿರ ಹತ್ತಿರ ಎಲ್ಲವೂ ಹತ್ತಿರ ಕೊನೆಗೆ ಮನಸ್ಸು ಮನಸ್ಸಿನ ನಡುವೆ
ಕಡಿಮೆಯ ಅಂತರ. ಬಾಲ್ಯದಲ್ಲಿ ನಾವು ಆಟವಾಡುತ್ತಾ ನೆಲದಲ್ಲಿ ಸ್ವಲ್ಪ ನೀರನ್ನು ವೃತ್ತಾಕಾರ ಇರುವಂತೆ
ಚೆಲ್ಲಿ... ಸ್ವಲ್ಪ ಅಂತರ ವಿದ್ದು ಇನ್ನೊಂದು ವೃತ್ತಾಕರದಲ್ಲಿ ಚೆಲ್ಲಿ ಮಧ್ಯೆ ಬೆರಳಿನಿಂದ ಅದೇ
ನೀರಿನ ಗೆರೆಯನ್ನು ಎಳೆಯುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಎರಡು ನೀರಿನ ವೃತ್ತಾಕಾರ.. ಪರಸ್ಪರ ಒಂದಾಗಿ ಬಿಡುತ್ತಿದ್ದವು.
ಇದೊಂದು ಆಟ ಆದರೆ ಬದುಕಿನ ಸತ್ಯ ಇದರಲ್ಲಿ ಅಡಗಿದೆ. ನೀರೆಂದರೆ ಮನಸ್ಸಿನ ಹಾಗೆ ಅಂತರ
ಕಡಿಮೆಯಾದಾಗ ಮನಸ್ಸು ಒಂದಾಗಿ ಆ ಮನಸ್ಸು ದೊಡ್ಡದಾಗುತ್ತದೆ. ಒಂದರ್ಥದಲ್ಲಿ ಸಣ್ಣ ಮನೆಯಲ್ಲಿ ದೇಹ
ದೇಹಗಳ ನಡುವೆ ಮನಸ್ಸು ಮನಸ್ಸಿನ ನಡುವೆ ಅಂತರ ಕಡಿಮೆ ಇದ್ದು ಮನಸ್ಸು ಒಂದೇ ಆಗಿ ದೊಡ್ಡದಾಗಿರುತ್ತದೆ. ದೊಡ್ಡ
ಮನೆಯಲ್ಲಿ.... ಮನೆ ದೊಡ್ಡದಾಗಿರುತ್ತದೆ .. ಸಹಜವಾಗಿ ಎಲ್ಲವೂ ಅಂತರದಲ್ಲೇ ಇದ್ದು .. ಮನಸ್ಸು
ಚಿಕ್ಕದಾಗಿರುತ್ತದೆ..
ನೀರು...ಇದು.. ಯಾವುದೇ ಆಕಾರದಲ್ಲಿ ಇರಬಹುದು...
ಮನಸ್ಸು ಹಾಗೇ ಯಾವುದೇ ಆಕಾರದಲ್ಲಿ ಇರಬಹುದು.. ಅದಕ್ಕೆ ಆಕಾರ ಕೊಡುವುದು ಸುತ್ತಲಿನ ಪರಿಸರ.
ಎರಡು ನೀರಿನ ನಡುವಣ ಅಂತರ ಕಡಿಮೆಯಾದರೆ .. ಕೊನೆಗೆ ಎರಡು ಇದ್ದದ್ದು ಒಂದಾಗುತ್ತದೆ. ಹಾಗೇ...
ಮನಸ್ಸಿನ ನಡುವೆ ಅಂತರ ಕಡಿಮೆಯಾದಷ್ಟು ಪರಸ್ಪರ ಸೇರಿದ
ಮನಸ್ಸು ದೊಡ್ಡದಾಗಿರುತ್ತದೆ.
No comments:
Post a Comment