ಈ ಭಾವಚಿತ್ರ ನೋಡಿ ಇಷ್ಟ ಸಲ್ಲಿಸದಿರಿ. ಇದು ಕೇವಲ ಸಾಂಕೇತಿಕ.
’ನೆಗಡಿ’ ಮೂಗಿನ ಇರವನ್ನು ನೆನಪಿಸುವ ಒಂದು ಬಾಧೆ. ನೆಗಡಿ ಔಷಧಿ ತೆಗೆದುಕೊಂಡರೆ ಒಂದುವಾರ ಇರುತ್ತದೆ, ಇಲ್ಲದೇ ಇದ್ದರೆ ಏಳು ದಿನ ಬಾಧಿಸುತ್ತದೆ ಎಂಬ ಮಾತಿದೆ. ಇದು ಏಳು ದಿನ ಯಾಕೆ ಬಾಧಿಸುತ್ತದೆ ಎಂಬುದು ತೀರ ಸರಳ. ಆದರೆ ಯಾರೂ ಗಂಭೀರ ತೆಗೆದುಕೊಂಡಿಲ್ಲ. ಔಷಧಿ ಇಲ್ಲದೆಯೂ ನೆಗಡಿಯಿಂದ ಸಂರಕ್ಷಣೆ ಪಡೇಯಬಹುದು. ಅದಕ್ಕೆ ಸ್ವಲ್ಪ ಸಹನೆ ಮೈಗೂಡಿಸಿಕೊಳ್ಳಬೇಕು.ಸಹಜವಾಗಿ ಶೀತ ಅಥವಾ ನೆಗಡಿ ಬರುವುದು ನಮ್ಮ ದೇಹದ ಅನಾರೋಗ್ಯದ ಸೂಚನೆ. ಅದು ನೆಗಡಿಯ ಮೂಲಕವೇ ವ್ಯಕ್ತಪಡಿಸುವುದು. ಏನೋ ಒಂದು ಬಾಧೆ ದೇಹಕ್ಕೆ ಅಂಟಿಕೊಂಡಿರುತ್ತದೆ. ದೇಹ ಅದರೊಂದಿಗೆ ಹೋರಾಡುತ್ತದೆ. ನಮ್ಮ ಉಸಿರಾಟ ಏರು ಪೇರಾಗುತ್ತದೆ. ಉಸಿರಾಟ ತುಸುವಾದರೂ ಏರು ಪೇರಾದರೆ ಶರೀರಕ್ಕೆ ಸೇರುವ ಆಮ್ಲಜನಕದ ಕೊರತೆ ಉಂಟಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ನೆಗಡಿ ಆರಂಭವಾದಾಗ ನಮ್ಮ ಉಸಿರಾಟ ಮತ್ತಷ್ಟು ಅಸಹಜ ಸ್ಥಿತಿಗೆ ಹೋಗಿ ನಾವು ಉಸಿರಾಡುವುದೇ ಕಷ್ಟವಾಗುತ್ತದೆ. ಹೀಗಾಗಿ ಎರಡು ದಿನದಲ್ಲಿ ಶಮನವಾಗಬಹುದಾದ ಶೀತ ಒಂದು ವಾರಕ್ಕೆ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಸಹನೆಯಿಂದ ನಮ್ಮ ಬಲವಂತದಿಂದ ಉಸಿರಾಟ ಸರಿಪಡಿಸಿಕೊಂಡರೆ ಶೀತ ಏಳು ದಿನ ಯಾಕೆ ಒಂದೇ ದಿನದಲ್ಲಿ ನೆಗಡಿ ಮಾಯವಾಗುತ್ತದೆ. ಅದು ಹೇಗೆ?
ಶೀತ ಬರುವಾಗ ಅದರ ಸೂಚನೆ ಮೊದಲೇ ಅರಿವಾಗುತ್ತದೆ. ಗಂಟಲು ಕೆರೆತ ತಲೆನೋವು ಕಣ್ಣು ಕಿವಿ ನೋವು ಹೀಗೆ ಆರಂಭದಲ್ಲೇ ಸ್ವಲ್ಪ ಜಾಗ್ರತೆ ವಹಿಸಿದರೆ ಶೀತ ಒಂದೇ ದಿನದಲ್ಲಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ. ಅದೂ ಯಾವುದೇ ಔಷಧಿ ಇಲ್ಲದೆ! ಶೀತ ಬಂದಾಗ ದಿನಕ್ಕೆ ಮೂರು ಹೊತ್ತು ಯಾವುದೋ ಆಂಟಿ ಬಯೋಟಿಕ್ ತೆಗೆದುಕೊಳ್ಳುವುದರ ಬದಲಾಗಿ ಮೂರು ಹೋತ್ತು ಒಂದೆಡೆ ಶಾಂತವಾಗಿ ಕುಳಿತು ದೀರ್ಘ ಶ್ವಾಸವನ್ನು ಸರಾಗವಾಗಿ ತೆಗೆದುಕೊಳ್ಳಬೇಕು. ಕಡಿಮೆ ಎಂದರೆ ಇಪ್ಪತ್ತೊಂದು ಸಲ ದೀರ್ಘವಾದ ಶ್ವಾಸ ತೆಗೆದುಕೊಂಡಾಗ ನಮ್ಮ ದೇಹಕ್ಕೆ ಹೆಚ್ಚು ಹೆಚ್ಚು ಆಮ್ಲಜನಕ ಒದಗಿ ಬರುತ್ತದೆ. ದೇಹ ಎದುರಿಸುವುದಕ್ಕೆ ಸಜ್ಜಾಗುತ್ತದೆ. ಬಂದ ರೋಗ ಏನಿದೆಯೋ ಅದು ದುರಾಗುತ್ತದೆ. ಆದಷ್ಟು ನಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಅನಾವಶ್ಯಕ ಉದ್ವೇಗ ಉದ್ರೇಕ ನಮ್ಮ ಉಸಿರಾಟದ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ. ಉಸಿರಾಟ ಏರು ಪೇರಾದಾಗ ನಮ್ಮ ದೇಹ ಅದಕ್ಕೆ ಸ್ಪಂದಿಸುತ್ತದೆ. ಶೀ ತ ಮತ್ತೂ ಮುಂದಕ್ಕೆ ಹೋದರೆ ಜ್ವರ ಖೆಮ್ಮುಇನ್ನಿತರ ಖಾಯಿಲೆಗಳು ಆರಂಭವಾಗುತ್ತದೆ
ಹಾಗಾಗಿ ಶೀತ ಬರುತ್ತದೆ ಎಂದು ಅರಿವಾದಾಗ, ತಾಸಿಗೊಂದು ಸಲ ದೀರ್ಘ ಶ್ವಾಸ ತೆಗೆದುಕೊಳ್ಳಬೇಕು. ಇಲ್ಲವಾದರೆ ಮೂರು ಹೊತ್ತಾದರೂ ತೆಗೆದುಕೊಳ್ಳಬೇಕು. ಆದಷ್ಟು ಮನಸ್ಸನ್ನು ಶಾಂತವಾಗಿರಿಸಿ ಕೊಳ್ಳಬೇಕು. ಅಸಹನೆ ಉದ್ರೇಕ ಕಡಿಮೆ ಮಾಡಿಕೊಳ್ಳಬೇಕು. ಹೇಳಿಕೇಳಿ ಈಗ ಚಳಿಗಾಲ. ಸಹಜವಾಗಿ ನೆಗಡಿ ಬಂದೇ ಬರುತ್ತದೆ.ಓ ಇದೊಂದು ಶೀತ ಎಂದು ಗೊಣಗಿ ನಮ್ಮದೇ ಮೂಗನ್ನು ಶಪಿಸುತ್ತೇವೆ. ಎಲ್ಲಕ್ಕಿಂತ ಮಿಗಿಲಾಗಿ ನಿತ್ಯ ಪ್ರಾಣಾಯಾಮ ಮಾಡಿದಲ್ಲಿ ನೆಗಡಿ ಜ್ವರ ಎಂದರೆ ಏನು ಎಂಬುದೆ ಮರೆತು ಹೋಗುತ್ತದೆ. ಶಾಂತ ಮನಸ್ಸು ಎಲ್ಲ ಅಶಾಂತಿಯನ್ನು ದೂರ ಮಾಡುತ್ತದೆ. ಉಸಿರೇ ಶಾಂತ ಮನಸ್ಸಿನ ಪ್ರತಿನಿಧಿ.
No comments:
Post a Comment