ನಮ್ಮ ಬಾಲ್ಯದ ಸಮಯದಲ್ಲಿ ಹಾಲು..ಮೊಸರು ತುಪ್ಪ ಇವುಗಳು ಇರುವ ಮನೆಗಳು ಶ್ರೀಮಂತರ ಮನೆಯಾಗಿರುತ್ತಿತ್ತು. ಇವುಗಳು ಇರಬೇಕಾದರೆ ಆ ಮನೆಯಲ್ಲಿ ಹಸು ಎಮ್ಮೆ ಇವುಗಳನ್ನು ಸಾಕುವುದು ಅನಿವಾರ್ಯ. ಮಾತ್ರವಲ್ಲ ನಮ್ಮಂತಹ ಬಡತನದ ಮನೆಯವರು ಮುಂಜಾನೆ ಎದ್ದು ಒಂದು ಚಿಕ್ಕ ಪಾತ್ರೆ ಹಿಡಿದು ಕೊಂಡು ಈ ಶ್ರೀಮಂತರ ಮನೆಯ ಜಗಲಿಯಲ್ಲಿ ಕಾದು ಕುಳಿತುಕೊಳ್ಳುವುದು ಸಾಮಾನ್ಯ. ಒಂದು ಕುಡುತೆ ಹಾಲಿಗಾಗಿ ಅವರ ಮನೆಯ ಜಗಲಿಯಲ್ಲಿ ಕಾದು ಕುಳಿತು, ಅವರ ದನದ ಹಾಲು ಅವರು ಕರಿಯುವುದನ್ನೇ ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು. ಹಲವು ಸಲ...ಕಾಯುವುದರ ನಡುವೆ ಅವರ ಮನೆಯ ಸಣ್ಣ ಪುಟ್ಟ ಚಾಕರಿಯನ್ನೂ ಮಾಡಬೇಕಾಗುತ್ತಿತ್ತು. ಬೆಳಗ್ಗೆ ಎದ್ದು ಹಾಲು ತರುವುದು ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಬಹಳ ದೂರದವರೆಗೂ ನಡೆದು ಹೋಗಬೇಕಾಗುತ್ತಿತ್ತು. ಅದೂ ಬರೀಗಾಲಲ್ಲಿ ನಡೆದುಕೊಂಡು ಬೆಳ್ಳಂಬೆಳಗ್ಗೆ ಚಳಿಗೆ ಹಾಲು ತರುವ ಕೆಲಸ ಅತ್ಯಂತ ಕಷ್ಟಕರದ ಕೆಲಸ. ಅದು ಒಂದಾದರೆ, ಇನ್ನು ಕೆಲವರಿಗೆ ಹಾಲು ತರುವುದಕ್ಕೆ ಹಣವೇ ಇರುವುದಿಲ್ಲ. ನಮ್ಮೂರಲ್ಲಿ ಕಣ್ಣ ಚಹ ಅಂತ ಹೇಳುವ ಹಾಗೆ ಹಾಲಿಲ್ಲದ ಕಪ್ಪು ಚಹವೇ ಕುಡಿಯಬೇಕಿತ್ತು. ಇನ್ನು ಕೆಲವರಿಗೆ ಹಾಲು ಹಾಕಿದ ಚಹಕ್ಕಿಂತಲೂ ಈ ಕಣ್ಣ ಚಹವೇ ಹೆಚ್ಚು ಇಷ್ಟವಾಗುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಕೆಲವು ಸಲ ಹೀಗೆ ಹಾಲು ತರುವ ವಾಡಿಕೆ ಇತ್ತು. ಈಗ ಬಿಡಿ ಪ್ಯಾಕೆಟ್ ಹಾಲು ಸಿಗದ ಊರಿಲ್ಲ. ಹಳ್ಳಿಯಲ್ಲೂ ಈ ಪ್ಯಾಕೆಟ್ ಹಾಲೇ ಆಸರೆ.
ಬಾಲ್ಯದಲ್ಲಿ ನನಗೆ ನೆನಪಿದೆ, ಈಗಿನ ಕಾಯರ್ ಕಟ್ಟೆಯ ಶಾಲೆಯ ಬಳಿ ನಮ್ಮಅಜ್ಜನಿಗೆ ಒಂದು ಹೋಟೇಲಿತ್ತು. ಆಗ ಹೋಟೇಲಿಗೆ ಹಾಲು ಬೇಕು. ಈಗಿನ ಹಾಗೆ ಪ್ಯಾಕೆಟ್ ನಲ್ಲಿ ಹಾಲು ಬರುವುದಿಲ್ಲ. ಈಗಿನ ಮಕ್ಕಳಿಗೆ ಹಾಲು ಮೂಲದಲ್ಲಿ ಎಲ್ಲಿಂದ ಬರುತ್ತದೆ ಎಂದೇ ತಿಳಿದಿರುವುದಿಲ್ಲ. ಹೆತ್ತ ತಾಯಂದಿರೇ ಹಾಲು ಕೊಡುವುದಕ್ಕೆ ಹಿಂಜರಿಯುವಾಗ ಹಾಲು ಎಂಬುದು ಒಂದು ಪ್ರಾಣಿ ಜನ್ಯ ಎಂಬ ಅರಿವು ಬಂದರೆ ಅದೇ ಭಾಗ್ಯ. ಹಾಲನ್ನು ಹಸುವಿನಿಂದ ಕರೆಯಲಾಗುತ್ತೆ ಎಂಬ ಅರಿವೇ ಇಲ್ಲದ ಕಾಲಮಾನ. ಮುಂಜಾನೆ ಎದ್ದು ಒಂದು ಪಾತ್ರೆ ಹಿಡಿದು ಕಾಯರ್ ಕಟ್ಟೆಯ ಕುಂಡೇರಿ ಎಂಬ ಜಾಗದಲ್ಲಿ ಬ್ರಾಹ್ಮಣರ ತೋಟದ ಮನೆಗೆ ಹೋಗುತ್ತಿದ್ದೆ. ಆಗ ಹಾಲು ತರುವುದಕ್ಕಿಂತಲೂ ಅಲ್ಲಿ ಬೆಳಗ್ಗೆ ತಿಂಡಿಯ ಸಮಯ. ಬಿಸಿ ಬಿಸಿ ಗೋದಿ ದೋಸೆ ತಟ್ಟೆಯಲ್ಲಿ ಹಾಕಿ ಕೊಡುತ್ತಿದ್ದರು. ಮನೆಯಲ್ಲಿ ಅರೆ ಹೊಟ್ಟೆಯ ಹಸಿವು, ಆ ಹಸಿವಿನ ಹೊತ್ತಿಗೆ ಆ ದೋಸೆಯ ಆಶೆಗೆ ಹಾಲು ತರುವುದಕ್ಕೆ ಕಷ್ಟವಾದರೂ ಉತ್ಸಾಹದಿಂದ ಹೋಗುತ್ತಿದ್ದೆ ಬಿಸಿ ದೋಸೆಯ ಆಕರ್ಷಣೆ ಬೆಳಗ್ಗಿನ ಚಳಿಯನ್ನು ಮೀರಿ ನಿಲ್ಲುತ್ತಿತ್ತು. ಈಗಲೂ ಹಾಲಿನ ನೆನಪಾದಾಗ ಆ ಮನೆಯ ಬಿಸಿ ದೋಸೆ ನೆನಪಾಗುತ್ತಿರುತ್ತದೆ.
ಹಾಲು ಮೊಸರು ತುಪ್ಪ...ಇದ್ದ ಮನೆಗಳು ಧನಿಕರ ಮನೆ ಅಂತ ಲೆಕ್ಕ. ಎಷ್ಟೇ ಬಡತನವಿದ್ದರೂ ಕೆಲವರು ಒಂದಾದರೂ ಹಸುವನ್ನು ಸಾಕುತ್ತಿದ್ದರು. ವರ್ಷಕ್ಕೆ ಒಂದು ಸಲ ಆ ಹಸು ಕರು ಹಾಕುವಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ಇನ್ನು ಹಾಲು ತರುವುದಕ್ಕೆ ಬೇರೆ ಕಡೆಗೆ ಹೋಗುವ ಹಾಗಿಲ್ಲ. ಬದಲಿಗೆ ನಮ್ಮ ಮನೆಗೆ ಹಾಲು ಕೊಂಡು ಹೋಗುವುದಕ್ಕೆ ಯಾರಾದರು ಬರುತ್ತಾರೆ. ಮತ್ತು ನಮ್ಮ ಮನೆಯ ಜಗಲಿಯಲ್ಲಿ ಕಾದುಕುಳಿತು ಬಿಡುತ್ತಾರೆ. ಹೀಗೆ ಏನೇನೋ ಆಕಾಂಕ್ಷೆಗಳು. ಈಗ ಹಾಲು ಇಲ್ಲದ ಮನೆ ಇಲ್ಲ. ಆದರೆ ಹಾಲು ಪ್ಯಾಕೆಟ್ ನಲ್ಲಿ ಬರುತ್ತದೆ ಮಾತ್ತ ವಾಸ್ತವ. ಮನೆಯ ಪಕ್ಕದ ರಸ್ತೆಯಲ್ಲಿ ಅಂಗಡಿ ಇದ್ದರೂ ಅಲ್ಲಿಂದ ಹಾಲು ತರುವುದಕ್ಕೆ ಉದಾಸೀನ. ಅದಕ್ಕೆ ಮನೆಯಲ್ಲಿ ಜನ ಇರುವುದಿಲ್ಲ. ಎಷ್ಟೇ ಬಡವರಾದರು ಒಂದು ಪ್ಯಾಕೆಟ್ ಆದರೂ ಹಾಲು ತಂದೇ ತರುತ್ತಾರೆ. ಮನೆಯಲ್ಲಿ ಹಸು ಎಮ್ಮೆ ಸಾಕುವವರು ಇಲ್ಲದೇ ಇದ್ದರೂ ಹಾಲು ಕುಡಿಯದ ಮನೆ ಇರಲಾರದು.
ಹಾಲು ಮೊಸರು ತುಪ್ಪ ಅದರಲ್ಲೂ ಮೊದಲು ತುಪ್ಪ ಎಂಬುದು ಬಡವರ ಮನೆಯಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಹಸುವನ್ನು ಸಾಕಿದ ಮನೆಯಲ್ಲೂ ತುಪ್ಪ ಇದ್ದರೂ ಅದನ್ನು ತಿನ್ನುವುದಕ್ಕೂ ಯೋಗ್ಯತೆ ಇರುತ್ತಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಪ್ರತೀ ಮನೆಯಲ್ಲೂ ಹಾಲು ತುಪ್ಪ ಅನಿವಾರ್ಯ ಘಟಕಗಳು. ಆದರೆ ಪ್ರತೀ ವರ್ಷ ಈ ಹಾಲಿನ ಬೆಲೆ ಹೆಚ್ಚಾಗುತ್ತಾ ಇರುತ್ತದೆ. ಸರಕಾರ ರೈತರಿಗಾಗಿ ಹಾಲಿನ ಬೆಲೆ ಹೆಚ್ಚಳ ಎಂದು ಮಾಡುತ್ತವೆ. ಇದರಲ್ಲಿ ಅಸಲಿ ರೈತರಿಗೆ ಎಷ್ಟು ಸಹಾಯವಾಗುತ್ತದೋ ಅದು ಬೇರೆ ವಿಷಯ. ಆದರೆ ಸರಕಾರ ಯಾವುದೋ ಉಚಿತ ಕೊಡುಗೆಗಳನ್ನು ಕೊಡುತ್ತವೆ. ಆಧನ ಈಧನ ಅಂತ ಸಹಾಯ ಧನವನ್ನು ಕೊಡುತ್ತದೆ. ಅದರೆ ಬದಲು ಈ ಹಾಲು ಉಚಿತವಾಗಿ ಕೊಟ್ಟರೆ ಅನುಕೂಲ. ಹಣ ನಗದಾಗಿ ಕೊಡುವುದರಿಂದ ಹಲವು ಸಲ ಅದು ದುರುಪಯೋಗವೂ ಆಗುವ ಸಂಭವ ಇರುತ್ತದೆ. ಹೆಂಡತಿ ಕೈಯಲ್ಲಿ ಹಣ ಇದ್ದರೆ ಗಂಡ ಸುಮ್ಮನೆ ಕುಳಿತುಕೊಳ್ಳಬಹುದೇ? ಅದನ್ನು ಹೇಗಾದರೂ ಮಾಡಿ ಕಿತ್ತು ಹೆಂಡದಂಗಡಿಗೆ ಸುರಿವ ಸಂಭವ ಇಲ್ಲ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಈ ಹಾಲು ಉಚಿತವಾಗಿ ಕೊಟ್ಟರೆ ಅದನ್ನು ಕುಡಿದೇ ಮುಗಿಸಬೇಕು. ಪರೋಕ್ಷವಾಗಿ ಇದು ರೈತರಿಗೆ ಸಹಾಯವಾಗಬಹುದು. ಅಲ್ಕೋ ಹಾಲಿನ ಬೆಲೆ ಹೆಚ್ಚಳಕ್ಕಿಂತಲೂ ಈ ಪ್ಯಾಕೆಟ್ ಹಾಲಿನ ಬೆಲೆ ಹೆಚ್ಚಳ ಮನುಷ್ಯರಿಗೆ ಹೆಚ್ಚು ತೊಂದರೆಯನ್ನು
No comments:
Post a Comment