ಚಿತ್ರ ಕೃಪೆ :ಅಂತರ್ಜಾಲಕ್ಕೆ ಧನ್ಯವಾದಗಳು
ಒಂದು ಊರಿನ ಅಂಚಿನಲ್ಲಿದ್ದ ಮರದ ಮೇಲೆ ಮೂರು ಮಂಗಗಳು ಇದ್ದವು. ಊರವರಿಗೆ ಆ ಮಂಗಗಳ ಮೇಲೆ ಅತೀವ ಅಭಿಮಾನ. ಯಾಕೆಂದರೆ ಆ ಮಂಗಗಳು ಹಲವು ಸಲ ಸುಮ್ಮನೆ ಕುಳಿತು ಬಿಡುತ್ತಿದ್ದವು. ಆಗ ಒಂದು ಮಂಗ ಕೆಟ್ಟದ್ದನ್ನು ನೋಡಲಾರೆ ಎಂದು ಕೊಂಡು ಕಣ್ಣು ಮುಚ್ಚಿದರೆ, ಇನ್ನೊಂದು ಕೆಟ್ಟದ್ದನ್ನು ಕೇಳಲಾರೆ ಅಂತ ಕಿವಿಯನ್ನೂ ಮತ್ತೊಂದು ಮಂಗ ಕೆಟ್ಟದ್ದನ್ನು ನುಡಿಯಲಾರೆ ಎಂದುಕೊಂಡು ಬಾಯಿಯನ್ನು ಮುಚ್ಚಿಕೊಳ್ಳುತ್ತಿದ್ದವು. ಹೀಗಾಗಿ ಊರವರಿಗೆ ಅವುಗಳು ಸಾರುವ ಸಂದೇಶಕ್ಕೆ ಅದರ ಮೇಲೆ ಅತೀವ ಅಭಿಮಾನ. ಒಂದು ದಿನ ಕಣ್ಣು ಮುಚ್ಚಿದ ಮಂಗ ಹೇಳಿತು, ನಾನು ಕೆಟ್ಟದ್ದನ್ನು ಕೇಳುತ್ತೇನೆ, ಆಗ ಕೆಟ್ಟದ್ದನ್ನು ಮಾತನಾಡಿಬಿಡುತ್ತೇನೆ. ಆಗ ಮನಸ್ಸಿಗೆ ಅದೊಂದು ರೀತಿಯ ಸಮಾಧಾನ ಸಿಗುತ್ತದೆ. ಆಗ ಕಿವಿಯನ್ನು ಮುಚ್ಚಿದ ಮಂಗ ನನಗೂ ಹಾಗೆ ಕೆಟ್ಟದ್ದನ್ನು ನೋಡಿಬಿಡುತ್ತೇನೆ, ಆಗ ಕೆಟ್ಟದ್ದು ಮಾತನಾಡಿ ಬಿಡುತ್ತೇನೆ. ಮನಸ್ಸಿಗೆ ಸಮಾಧಾನವಾಗುತ್ತದೆ. ಇನ್ನೊಂದು ಮಂಗ ಸುಮ್ಮನಿರಬೇಕೆ? ಇಲ್ಲ, ಅದು ಹೇಳಿತು ನಾನೂ ಕೆಟ್ಟದ್ದನ್ನು ಕೇಳುತ್ತೇನೆ ಆಗ ಕಣ್ಣಿಂದ ನೋಡುವ ಆಶೆಯಾಗಿ ಕೆಟ್ಟದ್ದು ನೋಡುತ್ತೇನೆ ಸಮಾಧಾನವಾಗುತ್ತದೆ. ಆದರೆ ಮಂಗಗಳು ಹೀಗೆ ಮಾತನಾಡುವುದು ಊರವರಿಗೆ ತಿಳಿಯುವುದಿಲ್ಲ. ಅವರ ಅಭಿಮಾನ ಹಾಗೇ ಇರುತ್ತದೆ. ಯಾವುದನ್ನೋ ಮಾಡಬಾರದೋ ಅವೆಲ್ಲವನ್ನೂ ಆ ಮಂಗಗಳು ಮಾಡುತ್ತವೆ. ಆದರೆ ಊರವರಿಗೆ ಅಭಿಮಾನ ಕಡಿಮೆಯಾಗುವುದಿಲ್ಲ. ಸಂದೇಶ ಇಷ್ಟೇ ,ಯಾವುದನ್ನೇ ಕೇಳಲಿ, ನೋಡಲಿ, ಅಥವಾ ಮಾತನಾಡಲಿ ಮನಸ್ಸು ಚಿಂತಿಸುವುದರಲ್ಲಿ ಅವುಗಗಳ ಪರಿಣಾಮಗಳು ಇರುತ್ತವೆ. ಪ್ರಪಂಚ ಎಂದ ಮೇಲೆ ಅಲ್ಲಿ ಕೇವಲ ಒಳ್ಳೆಯದು ಮಾತ್ರ ಇರುವುದಿಲ್ಲ. ಕೆಟ್ಟದ್ದು ಇದ್ದೇ ಇರಬೇಕು. ಅದನ್ನು ಸ್ವೀಕರಿಸುವ ರೀತಿಯಲ್ಲಿ ಅದರ ಒಳ್ಳೆಯದು ಮತ್ತು ಕೆಟ್ಟದರ ಪರಿಣಾಮವಿರುತ್ತದೆ. ಸನ್ಮನಸ್ಸು ಎಲ್ಲವನ್ನೂ ಗಮನಿಸುತ್ತದೆ. ಆದರೆ ಅದು ಕೆಡುವುದಿಲ್ಲ. ಒಂದುವೇಳೆ ಮನಸ್ಸನ್ನು ಕೆಡಿಸಿದರೆ ನಮ್ಮ ಚಿಂತನೆ ಕೆಟ್ಟಿದೆ ಎಂದು ಅರ್ಥ. ಕ್ರಿಯೆಗಿಂತಲೂ ಮನಸ್ಸಿನ ಚಿಂತನೆ ಮುಖ್ಯವಾಗುತ್ತದೆ. ಅದು ಪರಿಶುದ್ದವಾಗಿದ್ದರೆ ಮಾಡುವ ಕೆಟ್ಟದ್ದರಲ್ಲೂ ಒಳ್ಳೆಯದು ಇದ್ದೇ ಇರುತ್ತದೆ.
No comments:
Post a Comment